ಲಖನೌ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ಹೊಸ ಅರ್ಜಿಯ ಮೇರೆಗೆ ಹತ್ರಾಸ್ನ ವಿಶೇಷ ನ್ಯಾಯಾಲಯವೊಂದು ಶನಿವಾರ ಅವರಿಗೆ ನೋಟಿಸ್ ಜಾರಿ ಮಾಡಿದೆ. ಈ. ಆದರೆ ನ್ಯಾಯಾಂಗ ಅಧಿಕಾರಿ ಇಂದು ನ್ಯಾಯಾಲಯದ ಕಲಾಪ ನಡೆಸದ ಕಾರಣ ವಿಚಾರಣೆ ನಡೆಯಲಿಲ್ಲ. ಈಗ ಈ ಪ್ರಕರಣದ ವಿಚಾರಣೆಯು ಅಕ್ಟೋಬರ್ 15 ರಂದು ನಡೆಯಲಿದೆ ಎಂದು ದೂರುದಾರರ ಪರ ವಕೀಲ ಮುನ್ನಾ ಸಿಂಗ್ ಪುಂಧೀರ್ ತಿಳಿಸಿದ್ದಾರೆ. ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ಗಾಂಧಿ ಅವರಿಗೆ ನೋಟಿಸ್ ತಲುಪಿಸುವುದನ್ನು ನ್ಯಾಯಾಲಯವು ಅಂಗೀಕರಿಸಿತ್ತು ಎಂದು ಅವರು ತಿಳಿಸಿದರು.