ಬಿಗ್ ಬಾಸ್ ರಿಯಾಲಿಟಿ ಶೋನಿಂದ ಹೊರಬಂದು ಕೆಲಕಾಲ ಮೌನವಾಗಿದ್ದ ಮಾಡರ್ನ್ ಮಹಾಕವಿ ಮಂಜು ಈಗ ಹೊಸದಾದ. ಅಗ್ನಿ ಪರೀಕ್ಷೆ ಮೂಲಕ ಬಂದು ‘ಬಿಗ್ ಬಾಸ್’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದ ಮಂಜು, ಕೆಲವೊಂದು ವಿವಾದಾತ್ಮಕ ಕಾರಣಗಳಿಂದ ಶೋ ಮಧ್ಯದಲ್ಲೇ ಹೊರಬಂದಿದ್ದರು. ಶೋನಿಂದ ಎಲಿಮಿನೇಟ್ ಆದ ಬಳಿಕ ಸ್ವಲ್ಪ ಕಾಲ ಸೈಲೆಂಟ್ ಆಗಿದ್ದ ಅವರು, ಈಗ ಅಚ್ಚರಿಯ ರೀತಿಯಲ್ಲಿ ಮತ್ತೆ ವಾಪಸಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವಾಚ್ಯ ಪದ ಬಳಕೆ ಮಾಡಿದ್ದರು. ಅವರು ಹೊರಬಂದ ನಂತರ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಸದ್ಯ ಹೊಸ ಪ್ರಾಜೆಕ್ಟ್ ಒಂದರ ಮೂಲಕ ಅಭಿಮಾನಿಗಳ ಮುಂದೆ ಸರ್ಪ್ರೈಸ್ ಆಗಿ ಪ್ರತ್ಯಕ್ಷರಾಗಿದ್ದಾರೆ. ಅವರ ಈ ಹೊಸ ಹೆಜ್ಜೆ ಈಗ ಕುತೂಹಲ ಮೂಡಿಸಿದೆ.