ಪ್ರತಿಯೊಬ್ಬ ಮಕ್ಕಳಿಗೂ ತಮ್ಮ ಹೆತ್ತವರನ್ನು ಖುಷಿಯಾಗಿ ಇರಿಸಬೇಕೆಂಬ ಆಸೆ ಇರುತ್ತದೆ. ಅಂತಹ ಕ್ಷಣಗಳು ಬಂದರೆ ಅದಕ್ಕಿಂತ ಖುಷಿ ಇನ್ನೇನಿದೆ. ಹೌದು, ಇಂಡಿಗೋ ವಿಮಾನದ ಪೈಲೆಟ್ ಒಬ್ಬರು ತಮ್ಮ ತಂದೆಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಿದ್ದಾರೆ. ತಂದೆಯ 81ನೇ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಈ ಹೃದಯ ಸ್ಪರ್ಶಿ ಕ್ಷಣದ ವಿಡಿಯೋ ಸದ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ದೃಶ್ಯಗಳು ಹೃದಯಕ್ಕೆ ಹತ್ತಿರವಾಗುತ್ತವೆ. ಇಂಡಿಗೋ ವಿಮಾನದ ಪೈಲಟ್ ತಮ್ಮ ತಂದೆಯ 81ನೇ ಹುಟ್ಟುಹಬ್ಬವನ್ನು (Birthday) ವಿಭಿನ್ನವಾಗಿ ಆಚರಿಸಿದ್ದಾರೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ತಮ್ಮ ತಂದೆಯ ಬಗ್ಗೆ ವಿಶೇಷ ಘೋಷಣೆ ಮಾಡಿದ್ದಾರೆ.