ವಾರಾಣಸಿಯ ನಮೋ ಘಾಟ್ನಲ್ಲಿ 'ವಿಂಗ್ಸ್ ಓವರ್ ಗಂಗಾ' ವಾಯುಪ್ರದರ್ಶನ ನಡೆದಿದೆ. ಗಂಗಾ ನದಿಯ ಮೇಲೆ ಐಎಎಫ್ ಯುದ್ಧ ವಿಮಾನಗಳ ರೋಮಾಂಚಕ ಕಸರತ್ತು ನಡೆಯಿತು. ಇದನ್ನು ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ ಈ ಏರೋ ಶೋವನ್ನು ಮೆಚ್ಚಿಕೊಂಡಿದ್ದಾರೆ. ನಮೋ ಘಾಟ್ನಲ್ಲಿ ನಡೆದ ಈ ಅಭೂತಪೂರ್ವ ವೈಮಾನಿಕ ಪ್ರದರ್ಶನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಸಾಕ್ಷಿಯಾದರು.