ಅದು ಮಳೆಗಾಲವೇ ಆಗಿರಲಿ ಅಥವಾ ಬೇಸಿಗೆಯೇ ಆಗಿರಲಿ ಪ್ರತಿ ಸೀಸನ್ನಲ್ಲೂ ಸೊಳ್ಳೆಗಳ ಕಾಟ ಇದ್ದಿದ್ದೆ. ಈ ಸೊಳ್ಳೆಗಳು ಕಚ್ಚುವುದರಿಂದ ಡೆಂಗ್ಯೂ, ಮಲೇರಿಯಾದಂತಹ ರೋಗಗಳು ಹರಡುತ್ತವೆ. ಅಷ್ಟೇ ಅಲ್ಲದೆ ಸೊಳ್ಳೆ ಕಚ್ಚಿದ ಜಾಗದಲ್ಲಿ ತುರಿಕೆ, ದದ್ದು ಕಾಣಿಸಿಕೊಳ್ಳುತ್ತದೆ. ಅಷ್ಟಕ್ಕೂ ಈ ಸೊಳ್ಳೆಗಳು ಕಚ್ಚಿದಾಗ ತುರಿಕೆ ಉಂಟಾಗುವುದೇಕೆ ಗೊತ್ತಾ? ಇದರ ಹಿಂದಿನ ವೈಜ್ಞಾನಿಕ ಕಾರಣವನ್ನು ತಿಳಿಯಿರಿ. ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳು (mosquitos) ಮನೆಯೊಳಗೆ ಪ್ರವೇಶಿಸಲು ಆರಂಭಿಸುತ್ತವೆ. ಎಷ್ಟೇ ಜಾಗ್ರತೆ ವಹಿಸಿದರೂ ಸೊಳ್ಳೆಗಳು ಹುಡುಕಿ ಹುಡುಕಿ ಬಂದು ನಮ್ಮನ್ನೇ ಕಚ್ಚುತ್ತವೆ. ಇವು ಗಾತ್ರದಲ್ಲಿ ಸಣ್ಣದಾಗಿದ್ದರೂ, ಇವುಗಳು ಕಚ್ಚಿದಾಗ ಉಂಟಾಗುವ ಪರಿಣಾಮ ಅಷ್ಟಿಷ್ಟಲ್ಲ. ಹೌದು ಸೊಳ್ಳೆಗಳ ಕಡಿತದಿಂದ ಡೆಂಗ್ಯೂ, ಮಲೇರಿಯಾದಂತಹ ಕಾಯಿಲೆಗಳು ಉಂಟಾಗುತ್ತವೆ.