ಹುಬ್ಬಳ್ಳಿ: ಆರಂಭಗೊಂಡು ನಾಲ್ಕು ವರ್ಷದಲ್ಲಿ ನವನಗರದ ಕುರುಹಿನಶೆಟ್ಟಿ (ನೇಕಾರ) ಸಮಾಜ ಅಭಿವೃದ್ಧಿ ಸಂಘವು ಬಹಳಷ್ಟು ಪ್ರಗತಿ ಸಾಧಿಸಿ ಮಾದರಿಯಾಗಿದೆ ಎಂದು ಧಾರವಾಡ ಜಿಲ್ಲಾ ನೇಕಾರ ಸಮುದಾಯ ಒಕ್ಕೂಟ. ಸಂಘದ ಸದಸ್ಯರು ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ವಾರ್ಷಿಕೋತ್ಸವ ಆಚರಣೆ ಮಾಡಿದ್ದಾರೆ. ಸದಸ್ಯರು ದೇಣಿಗೆಯಿಂದಲೇ ಕಾರ್ಯಕ್ರಮ ನಡೆಸುವ ಮೂಲಕ ಸಂದ ಹಣ ಉಳಿತಾಯಕ್ಕೂ ಸಾಕ್ಷಿಯಾಗಿದ್ದಾರೆ. ಕುರುಹಿನಶೆಟ್ಟಿ ಸಮಾಜದ ಮಕ್ಕಳಿಗೆ ಕೆಲವೆಡೆ ಉಂಟಾಗಿದ್ದ ಜಾತಿ ಪ್ರಮಾಣಪತ್ರ ಸಮಸ್ಯೆಯನ್ನು ಪರಿಹರಿಸಿದ್ದೇವೆ. ಮುಂದೆಯೂ ಒಗ್ಗಟ್ಟು ಹೆಚ್ಚಲಿ ಎಂದು ಸಲಹೆ ನೀಡಿದರು.