Bigg Boss Kannada 13: ಸಾಮಾನ್ಯವಾಗಿ ಅಲ್ಲಿ ಕಳ್ಳತನವಾಗುವುದು ಊಟ ಅಥವಾ ತಿಂಡಿ ತಿನಿಸುಗಳು. ಕಳೆದ ವಾರ ಮನೆಯ ಎಲ್ಲ ಸದಸ್ಯರು ಅದ್ಭುತವಾಗಿ ಟಾಸ್ಕ್ ಆಡಿದ್ದರು. ಆದರೆ ಈ ಟಾಸ್ಕ್ ಆಡುವ ವೇಳೆ ಕಿರಣ್ ಶಾಸ್ತ್ರಿ ಮತ್ತು ಜಗದೀಶ್ ಅವರು ಮನೆಯವರಿಗೆ ಕೊಡಲಾಗಿದ್ದ ತಿನಿಸನ್ನು ಕದ್ದು ಇರಿಸಿಕೊಂಡಿದ್ದರು. ಆ ವಿಡಿಯೋ ಅನ್ನು ಎಲ್ಲರ ಮುಂದೆ ಸುದೀಪ್ ಅವರು ತೋರಿಸಿದರು. ಬಿಗ್ಬಾಸ್ ಮನೆಯಲ್ಲಿ ಆಗಾಗ್ಗೆ ಕಳ್ಳತನಗಳು ನಡೆಯುತ್ತಲೇ ಇರುತ್ತವೆ. ಬೇರೆ ಸ್ಪರ್ಧಿಗಳಿಗೆ ಸಿಗದಂತೆ ತಿನಿಸನ್ನು ಕದ್ದ ಕಿರಣ್ ಮತ್ತು ಜಗದೀಶ್ ಅವರಿಗೆ ಖುದ್ದು ಸುದೀಪ್ ಅವರೇ ಶಿಕ್ಷೆ ಘೋಷಣೆ ಮಾಡಿದರು.