ಹೊಸ ಭಾರತದಲ್ಲಿ ಯುದ್ಧಗಳ ಸ್ವರೂಪ ಬದಲಾಗಿದ್ದು, ಕೇವಲ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳಿಂದ ಮಾತ್ರವಲ್ಲದೆ ದೇಶಗಳ ಆರ್ಥಿಕತೆಯನ್ನೇ ಗುರಿಯಾಗಿಸಿಕೊಂಡು ಯುದ್ಧಗಳನ್ನು ಮಾಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತದ ಬ್ಯಾಂಕಿಂಗ್ ವ್ಯವಸ್ಥೆಯನ್ನು "ಸೈಬರ್ ದರೋಡೆಕೋರರು ಮತ್ತು ಸೈಬರ್ ಭಯೋತ್ಪಾದಕರಿಂದ" ರಕ್ಷಿಸುವುದು ಅತ್ಯಂತ ತುರ್ತು ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ. ಒಡಿಶಾದ ಭುವನೇಶ್ವರದಲ್ಲಿ ಆರ್ಬಿಐನ 169 ಕೋಟಿ ರೂ. ವೆಚ್ಚದ ನೂತನ ಡೇಟಾ ಸೆಂಟರ್ ಮತ್ತು ಸೈಬರ್ ಸೆಕ್ಯುರಿಟಿ ತರಬೇತಿ ಸಂಸ್ಥೆಯನ್ನು ಉದ್ಘಾಟಿಸಿದ ಅವರು, "ಒಂದು ದೇಶವನ್ನು ದುರ್ಬಲಗೊಳಿಸಬೇಕಾದರೆ, ಅದರ ಆರ್ಥಿಕತೆಯ ಮೇಲೆ ದಾಳಿ ಮಾಡಿದರೆ ಸಾಕು.