ಬೆಂಗಳೂರು: ಟೀಮ್ ಇಂಡಿಯಾ ಕಂಡ ಶ್ರೇಷ್ಠ ನಾಯಕ, ಅಭಿಮಾನಿಗಳ ಅಚ್ಚುಮೆಚ್ಚಿನ 'ಕ್ಯಾಪ್ಟನ್ ಕೂಲ್', ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಐಪಿಎಲ್ ಭವಿಷ್ಯದ. ಈಗಾಗಲೇ ಬಹುತೇಕರು ಧೋನಿ ಅವರ ಐಪಿಎಲ್ ಕರಿಯರ್ 19ನೇ ಆವೃತ್ತಿಗೆ ಮುಗಿದಿದೆ ಎಂದೇ ಅಂದುಕೊಂಡಿದ್ದಾರೆ. ಈ ಕುರಿತಾದ ಕೆಲವು ಕುತೂಹಲಕಾರಿ ಪ್ರಶ್ನೆಗಳಿಗೆ ಅಭಿಮಾನಿಗಳ ನೆಚ್ಚಿನ ಮಾಹಿ ಕೊಟ್ಟಿರುವ ಉತ್ತರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಧೋನಿ, ಈ ಸಂದರ್ಭದಲ್ಲಿ, ತಮಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳಿಗೆ ಎಂದಿನಂತೆ ತಮ್ಮ ಶೈಲಿಯಲ್ಲೇ ಉತ್ತರಿಸಿದರು.