ಸಿಂದಗಿ : ನಾಡಹಬ್ಬಗಳು ಸಂಸ್ಕೃತಿ, ಸಂಸ್ಕಾರ ಮತ್ತು ಗತವೈಭವದ ಜೀವಂತಿಕೆಯನ್ನು ಸಂಭ್ರಮದ ಆಚರಣೆಯೊಂದಿಗೆ ಇಮ್ಮಡಿಗೊಳಿಸುತ್ತಿವೆ ಎಂದು ಚಲನಚಿತ್ರ ಸಾಹಿತಿ ಹಾಗೂ ಗೀತ ರಚನೆಕಾರ ಡಾ.ವಿ. ನಾಗೇಂದ್ರಪ. ನಾಗೇಂದ್ರಪ್ರಸಾದ್ ಅಭಿಪ್ರಾಯಪಟ್ಟರು.ನಗರದ ಮಾಂಗಲ್ಯ ಭವನದಲ್ಲಿ ಡ್ಯಾನಿ ಅಕಾಡೆಮಿ ಹಾಗೂ ಎ.ಬಿ.ಸಿ.ಡಿ ಡ್ಯಾನ್ಸ್ ಕ್ಲಾಸ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ನವರಾತ್ರಿ ವೈಭವ-ದಾಂಡಿಯಾ ನೃತ್ಯೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ನಮಗೆಲ್ಲರಿಗೂ ನಮ್ಮ ಸಂಸ್ಕೃತಿಯ ವೈವಿಧ್ಯತೆ, ಸಾಂಪ್ರದಾಯಿಕ ಮತ್ತು ಅಮೂಲ್ಯ ಆಸ್ತಿಯನ್ನು ಸಂರಕ್ಷಿಸಬೇಕಿದೆ. ಆಧುನಿಕತೆಯಲ್ಲೂ ಮಹಿಳೆಯರ ಪಾಲ್ಗೊಳ್ಳುವಿಕೆಯ ಕಲೆ, ಮನರಂಜನೆಯತ್ತ ಹೊರಳಿರುವುದು ಹೆಮ್ಮೆ. ಮಹಿಳೆಯರು ನಾಡಿನ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ಉತ್ಸುಕರಾಗಿದ್ದು, ಅದೇ ಸಂಸ್ಕಾರವನ್ನು ಭವಿಷ್ಯದ ಪೀಳಿಗೆಗೆ ಜೀವಂತ ಕೊಡುಗೆ ನೀಡಬೇಕು ಎಂದು ಹೇಳಿದರು.