ಕಳೆದ ಹತ್ತು ವರ್ಷಗಳಿಂದಲೂ ‘ರಾಮಾಯಣ’ ಕತೆಯ ಮೇಲೆ ಕೆಲಸ ಮಾಡಿದ್ದಾರೆ. ಪ್ರತಿ ಪಾತ್ರಗಳನ್ನು ಆಳವಾಗಿ ಅಧ್ಯಯನ ಮಾಡಿದ್ದು ಮಾತ್ರವಲ್ಲದೆ ಅವರ ಉಡುಗೆ, ತೊಡಗೆ, ಮಾತಿನ ಶೈಲಿ, ಆಭರಣಗಳ ಬಗ್ಗೆಯೂ ವಿಶೇಷ ಕಾಳಜಿ ವಹಿಸಿದ್ದಾರೆ. ಈ ಸಿನಿಮಾನಲ್ಲಿ ಬಳಲಾಗಿರುವ ಆಭರಣಗಳನ್ನು ತಯಾರಿಸಲು ಹಲವಾರು ಕಲಾವಿದರು ಕೆಲಸ ಮಾಡಿದ್ದಾರೆ. ಸಿನಿಮಾದ ಟ್ರೈಲರ್, ಟೀಸರ್ ಕೆಲ ಹಾಡುಗಳು ಈಗಾಗಲೇ ರಿಲೀಸ್ ಆಗಿದ್ದು, ಸಿನಿಮಾದ ಅದ್ಧೂರಿತನ ಎದ್ದು ಕಾಣುತ್ತಿದೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸಾಯಿ ಪಲ್ಲವಿ ಹೇಳಿದಂತೆ ನಿರ್ದೇಶಕ ನಿತೀಶ್ ತಿವಾರಿ ಅವರು ಈ ಸಿನಿಮಾಕ್ಕಾಗಿ ಹತ್ತು ವರ್ಷ ಕಷ್ಟಪಟ್ಟಿದ್ದಾರಂತೆ. ಕಳೆದ ಹತ್ತು ವರ್ಷಗಳಿಂದಲೂ ಅವರು ಈ ಕತೆಯ ಮೇಲೆ ಕೆಲಸ ಮಾಡಿದ್ದಾರೆ.