ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನಲ್ಲಿರುವ ಮೊಸಳೆ ಪಾರ್ಕ್ನಲ್ಲಿ ಅಪರೂಪದ ದೃಶ್ಯವನ್ನು ನೀವು ಕಣ್ತುಂಬಿಕೊಳ್ಳಬಹುದು. ವ್ಯಕ್ತಿಯ ಧ್ವನಿ ಕೇಳಿ ನದಿಯಿಂದ ದಡಕ್ಕೆ ಬಂದ ಮೊಸಳೆಯನ್ನು ಕಂಡು ಅಲ್ಲಿದ್ದ ಪ್ರವಾಸಿಗರು ಅಚ್ಚರಿಗೊಂಡಿದ್ದಾರೆ. ಬಾತುಕೋಳಿಯ ಧ್ವನಿ ಅನುಕರಣೆ ಮಾಡಿದ ಪ್ರವಾಸಿಗನ ಧ್ವನಿ ಕೇಳಿ ಮೊಸಳೆ ದಡಕ್ಕೆ ಆಗಮಿಸಿದೆ. ದಾಂಡೇಲಿಯ ಮೊಸಳೆ ಪಾರ್ಕ್ಗೆ ಪ್ರತಿದಿನ ನೂರಾರು ಪ್ರವಾಸಿಗರು ಬರುತ್ತಾರೆ. ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿರುವ ಮೊಸಳೆ ಪಾರ್ಕ್ನಲ್ಲಿ ಈ ಘಟನೆ ನಡೆದಿದೆ.