ಬೆಂಗಳೂರಿನ ಪುಲಿಕೇಶಿನಗರದಲ್ಲಿ ನಡೆದ ಅನುಮಾನಾಸ್ಪದ ಸ್ಫೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ ಸಿಕ್ಕಿದೆ. ಪುಲಕೇಶಿನಗರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಈ ಕೃತ್ಯದ ಹಿಂದಿನ ಅಸಲಿ ಸತ್ಯ ಕೂಡ ಬಯಲಾಗಿದೆ. ಸ್ಫೋಟದ ಕುರಿತಾಗಿ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸ್ಫೋಟಕ ವಿಚಾರ ಬಿಚ್ಚಿಟ್ಟಿದ್ದಾರೆ. ಬೆಂಗಳೂರು, ಅಕ್ಟೋಬರ್ 25: ಇತ್ತೀಚೆಗೆ ದಸರಾ ಸಡಗರದ ವೇಳೆ ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಐದಂತಸ್ತಿನ ಕಟ್ಟಡದಲ್ಲಿ ಬ್ಲಾಸ್ಟ್ ಆಗಿತ್ತು. IED ಬಾಂಬ್ಗೆ ಬಳಸುವ ವಸ್ತುಗಳು ಕೂಡ ಸ್ಥಳದಲ್ಲಿ ಪತ್ತೆಯಾಗಿದ್ದವು. ಜಲಾಲುದ್ದೀನ್, ಸೈದುಲಾ ಇಸ್ಲಾಂ, ಬುರ್ಹಾನ್ ಬಂಧಿತ ಆರೋಪಿಗಳು. ಸ್ಫೋಟಕ್ಕೆ ವೈಯಕ್ತಿಕ ದ್ವೇಷವೇ ಕಾರಣ ಸ್ಫೋಟದ ಹಿಂದಿನ ಅಸಲಿ ಸತ್ಯ ಇದೀಗ ಬಯಲಾಗಿದೆ.